ಬೊಗಳೆ ರಗಳೆ

header ads


ಇಲ್ಲಿ ಹೊಸ ಗಂಡ ಮಾರಾಟಕ್ಕೆ ಲಭ್ಯ !

(ಬೊಗಳೂರು ನೆಟ್ಗಳ್ಳರ ಬ್ಯುರೋ)
ಬೊಗಳೂರು, ಏ.26- ಅಸತ್ಯಾನ್ವೇಷಿಯು ನೆಟ್‌ನಲ್ಲಿ ವಿನೋದ ವಿಹಾರದಲ್ಲಿದ್ದಾಗ ನ್ಯೂಯಾರ್ಕ್ ನಿಂದ ಈ ಸುದ್ದಿ ಸಿಕ್ಕಿದೆ.

ನಿಮಗೆ ಹೊಚ್ಚ ಹೊಸ ಗಂಡ ಬೇಕೇ? ನ್ಯೂಯಾರ್ಕ್ ಪಟ್ಟಣಕ್ಕೆ ಭೇಟಿ ನೀಡಿ. ಅಲ್ಲಿನ ದೊಡ್ಡ ಮಳಿಗೆಯೊಂದಿದೆ. ಇದರಲ್ಲಿ ಪತಿಯ ಹುಡುಕಾಟದಲ್ಲಿರುವ ಮಹಿಳೆ ಹೊಚ್ಚ ಹೊಸ ಗಂಡನನ್ನು ಪಡೆದುಕೊಳ್ಳಬಹುದು.

ಈ ಮಳಿಗೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಬಾಗಿಲಲ್ಲೇ ಬೋರ್ಡ್‌ನಲ್ಲಿ ಸಮಗ್ರ ಮಾಹಿತಿ ತೂಗು ಹಾಕಿದ್ದಾರೆ. ಅದರಲ್ಲಿ ಸೂಚನೆಗಳಿವೆ.

ಒಂದು ನಿಯಮ. ನೀವಿಲ್ಲಿಗೆ ಒಂದು ಬಾರಿ ಮಾತ್ರ ಭೇಟಿ ನೀಡಬಹುದು. ಬಹುಶಃ ಪತಿವ್ರತೆಯಾಗಿರಲಿ ಎಂಬ ಉದ್ದೇಶದಿಂದ. ಆರು ಮಹಡಿಗಳಿವೆ. ಖರೀದಿದಾರ್ತಿಯು ಮಹಡಿ ಏರಿದಂತೆಲ್ಲಾ ಉತ್ಪನ್ನಗಳ ಬೆಲೆಯೂ ಮೇಲೇರುತ್ತಾ ಹೋಗುತ್ತದೆ. ಯಾವುದೇ ಮಹಡಿಯಲ್ಲಿರೋ ಮಳಿಗೆಯಿಂದ ಆಕೆ ಗಂಡನನ್ನು ಆಯ್ದುಕೊಳ್ಳಬಹುದು ಇಲ್ಲವೇ ಇನ್ನಷ್ಟು ಉತ್ತಮ ಕ್ವಾಲಿಟಿ ಬೇಕಿದ್ದರೆ ಮುಂದಿನ ಮಹಡಿಗೆ ಮುಂದುವರಿಯಬಹುದು. ಆದರೊಂದು ಕಂಡಿಷನ್ನು. ಆಕೆ ಮಳಿಗೆಯಿಂದ ಹೊರಗೆ ಹೋಗುವುದಕ್ಕೆ ಬಿಟ್ಟು, ಬೇರಾವುದೇ ಕಾರಣಕ್ಕೆ ವಾಪಸ್ ಕೆಳಗೆ ಬರುವಂತಿಲ್ಲ.

ಇಂತಿರಲಾಗಿ...

ಭಾರತದಿಂದ ಅಮೆರಿಕಕ್ಕೆ ತೆರಳಿದ ಮಹಿಳೆಯೊಬ್ಬಳು ಈ ಮಳಿಗೆಗೆ ಗಂಡನ್ನು ಖರೀದಿಸಲೆಂದು ಭೇಟಿ ಕೊಟ್ಟಳು. ಮೊದಲ ಮಹಡಿಯೇರಿದಳು. ಅಲ್ಲಿನ ಬಾಗಿಲಲ್ಲಿ ಈ ರೀತಿ ಬರೆದಿತ್ತು. "1ನೇ ಮಹಡಿ: ಈ ಪುರುಷರಿಗೆ ಉದ್ಯೋಗವಿದೆ".ಮುಂದಿನ ಮಹಡಿಯಲ್ಲೇನಿರಬಹುದೆಂಬ ಕುತೂಹಲ. ಸರಿ 2ನೇ ಮಹಡಿಗೆ ಹೋದಾಗ ಅಲ್ಲಿ ಬಾಗಿಲಲ್ಲಿ ಬರೆದಿತ್ತು.

”ಮಹಡಿ 2: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ.
”3ನೇ ಮಹಡಿ ಬಾಗಿಲಲ್ಲಿ ಈ ರೀತಿ ಬರೆದಿತ್ತು. ” ಮಹಡಿ 3: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ, ಮತ್ತು ತುಂಬಾ ಸುಂದರ ಮೈಕಟ್ಟು ಹೊಂದಿದ್ದಾರೆ.”

”ವ್ಹಾವ್...” ಎನ್ನುತ್ತಾ ಮುಂದೆ ಹೋದಳಾಕೆ. ”ಮಹಡಿ 4: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ, ಮತ್ತು ತುಂಬಾ ಸುಂದರ ಮೈಕಟ್ಟು ಹೊಂದಿದ್ದು, ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ.” ಅಲ್ಲಿ ಬರೆದಿತ್ತು.

”ವಾಹ್...ನಾನೆಷ್ಟು ಲಕ್ಕಿ, ನಂಬಲಸಾಧ್ಯ” ಎಂದು ಉದ್ಗರಿಸಿದ ಆಕೆ ಇನ್ನೂ ಮುಂದುವರಿದಳು. ಅಲ್ಲಿ ಬರೆದಿತ್ತು- ” ಮಹಡಿ 5: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ, ಮತ್ತು ತುಂಬಾ ಸುಂದರ ಮೈಕಟ್ಟು ಹೊಂದಿದ್ದು, ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ. ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ”.

ಇದಾಗಬಹುದು ಎಂದು ಅವಳಲ್ಲೇ ನಿಲ್ಲುತ್ತಾಳೆ. ಆದರೂ ಹುಚ್ಚು ಮನಸ್ಸು. ತಡೀಲೊಲ್ಲದು. ಇನ್ನೂ ಮೇಲೆ ಹೋದರೆ ಮತ್ತೂ ಒಳ್ಳೆಯ ಗಂಡ ಸಿಗಬಹುದೆಂಬ ಬಲವಾದ ವಿಶ್ವಾಸ. ಆರನೇ ಮತ್ತು ಕೊನೆಯ ಮಹಡಿಯೇರಿದಳು.

ಅಲ್ಲಿ ಬರೆದಿತ್ತು- ” ಮಹಡಿ 6: ನೀವು ಇಲ್ಲಿಗೆ ಭೇಟಿ ನೀಡಿದ ಮಹಿಳೆಯರಲ್ಲಿ 31,4,56,012ನೆಯವರು, ಈ ಮಹಡಿಯಲ್ಲಿ ಪುರುಷರೇ ಇಲ್ಲ. ಮಹಿಳೆಯರ ಮನಸ್ಸನ್ನು ಮೆಚ್ಚಿಸುವುದು ಅಸಾಧ್ಯ ಎಂಬ ಉಕ್ತಿಗೆ ಸಾಕ್ಷಿಯಾಗಿ ಈ ಮಹಡಿ ನಿಂತಿದೆ. ಗಂಡನ ಖರೀದಿಗಾಗಿ ಅಂಗಡಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ”.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ನೀವು ನಿಮ್ಮ ಹೆಂಡತಿಗೆ ಸಿಕ್ಕಿದ್ದು ಯಾವ ಮಹಡಿಯಲ್ಲಿ ಎಂದು ತಿಳಿಯಬಹುದೇ?

    ಪ್ರತ್ಯುತ್ತರಅಳಿಸಿ
  2. ಹ್ಹ ಹ್ಹ ಹ್ಹ ಶ್ರೀ ಶ್ರೀ ಶ್ರೀ ಥ್ರೀ ಥ್ರೀ ಥ್ರೀ ಅವರೆ,

    ನಾನು ಹೆಂಡ್ತಿಗೆ ಸಿಕ್ಕಿದ್ದಲ್ಲ, ಹೆಂಡ್ತಿಯೇ ನನಗೆ ಸಿಕ್ಕಿದ್ದು. ಹೇಗೆ ಗೊತ್ತೇ? ಗಂಡು ಖರೀದಿಯ ಮಳಿಗೆಯ ಮೇಲೇರಿ ಆಕೆ ಹೊರಬಂದಾಗ !!!

    ಪ್ರತ್ಯುತ್ತರಅಳಿಸಿ
  3. ಈ ಬೊಗಳೆ ಓದುತ್ತಿರುವಾಗ ನನಗೆ ಏನೇನೋ ಶಂಕೆ (ಆಮ ಅಲ್ಲ) ಬರುತ್ತಿದೆ.

    ಒಂದನೆಯ ನಿಯಮದಲ್ಲಿ ಹೇಳಿರುವಂತೆ ಯಾವ ಉತ್ಪನ್ನದ ಬೆಲೆ ಏರುತ್ತದೆ?
    ಎರಡನೆಯ ಮಹಡಿಯಲ್ಲಿ ಬರೆದಿರುವಂತೆ ಯಾರ ಮಕ್ಕಳನ್ನು ಪ್ರೀತಿಸುತ್ತಾರೆ?
    ನಾಲ್ಕನೆಯ ಮಹಡಿಯಲ್ಲಿ ತಿಳಿಸಿರುವಂತೆ ಯಾರ ಮನೆಯ ಕೆಲಸದಲ್ಲಿ ಸಹಾಯ ಮಾಡುವರು - ಪಕ್ಕದ ಮನೆಯವರದ್ದಾ?
    ಐದನೆಯ ಮಹಡಿಯಲ್ಲಿ ತಿಳಿಸಿರುವಂತೆ ರೊಮ್ಯಾಂಟಿಕ್ ಆಗಿದ್ದಾರೋ ಅಥವಾ ರೂಮ್ಯಾಟಿಸಂ ಹೊಂದಿದ್ದಾರೋ ಸ್ವಲ್ಪ ಅನುಮಾನ ಬರುತ್ತಿದೆ.
    ಅಂದ ಹಾಗೆ ಆರನೆಯ ಮಹಡಿಗೆ ಮಹಿಳೆಯರು ಹುಡುಕಿಕೊಂಡು ಬಂದಿದ್ದಾರೆ ಮತ್ತು ಅಲ್ಲಿ ಪುರುಷರಿಲ್ಲ ಎಂದರೆ ಮಧ್ಯದವರು ಇರುವರಾ?
    ನನ್ನ ತಲೆಕೆಡುತ್ತಿದೆ. ತಕ್ಷಣ ಉತ್ತರಿಸಿ ಇಲ್ಲದಿದ್ದರೆ ತಲೆ ಹೋಳಾದೀತು (ನನ್ನದಲ್ಲ ನಿಮ್ಮದು ಏಕೆಂದರೆ ನನ್ನ ಹೆಸರು ಬೇತಾಳ)

    ಪ್ರತ್ಯುತ್ತರಅಳಿಸಿ
  4. ಹೌದು ಹೌದು "ಮಾವಿನ ಸವಿಯ"ವರೆ,
    ನಿಮ್ಮ ವಿಶ್ಲೇಷಣಾತ್ಮಕ ಆಮಶಂಕೆ ಸಹಜವಾದದ್ದೇ. ಆದರೆ ಆಯಾ ಮಹಡಿಯಲ್ಲಿರುವ ನಿಯಮಗಳನ್ನು ನೀವು ತಿಳಿದುಕೊಂಡಿರುವಂತೆಯೇ, ಸುಳ್ಳಿನ ತಲೆ ಮೇಲೆ ಹೊಡೆದಂತೆ ನಿರೂಪಿಸಿಬಿಟ್ಟರೆ, "ಸತ್ಯ ವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು" ಅನ್ನೋ ನಮ್ಮ ಧ್ಯೇಯ ವಾಕ್ಯಕ್ಕೆ ವಿರುದ್ಧವಾಗುತ್ತದೆ. ಅದಕ್ಕಾಗಿ ಇದು ಯದ್ಭಾವಂ, ತದ್ಭವತಿ. ಈ ಕಾರಣಕ್ಕೆ ನಿಮ್ಮ ವಿಶ್ಲೇಷಣಾತ್ಮಕ ತಲೆಯ ಒಂದು ಹೋಳನ್ನು ಬೊಗಳೂರು ಬ್ಯುರೋಕ್ಕೆ ಕಳುಹಿಸಿಕೊಡಿ.

    ಪ್ರತ್ಯುತ್ತರಅಳಿಸಿ
  5. manassu yehst chanchala annodu idrinda gottagatte:) nimma baraha kooda chennagide...


    somu...


    nimma blgnalli nanna putaani navilugarige koncha jaaga kodi...

    nimma somu


    www.navilagari.wordpress.com

    ಪ್ರತ್ಯುತ್ತರಅಳಿಸಿ
  6. ಆಶೆಯೇ ದುಃಖಕ್ಕೆ ಮೂಲ,
    ಎಷ್ಟು ನಿಜ...
    ಇದು ಅತಿ ಆಶೆ..!!

    ಚ0ಚಲ್ ಮನಸಿನ ಹೆಣ್ಣುಗಳ ಬಗ್ಗೆ ಸಖತ್ ಬರಹ..
    ಬಹು ಮೆಚ್ಚುಗೆಯಾಯ್ತು...
    ನಿಮ್ಮ ಆಲೋಚನಾ ವಿಧಾನವೇ ವಿಭಿನ್ನ....

    ಶುಭವಾಗಲಿ...
    ನನ್ನಿ
    \\||//

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D