ಬೊಗಳೆ ರಗಳೆ

header ads

ಬ್ಲಾಗಿಸಲು ಅಸಾಧ್ಯವಾಗುತ್ತಿದೆಯೇ?

ಬೊಗಳಿಗರಿಗೊಂದು ಕಹಿ ಸುದ್ದಿ ನಡುವೆ ಸಂತಸದ ಸುದ್ದಿ.

ಚೀನಾದಲ್ಲಿ ಇಂಟರ್ನೆಟ್ ನಿಷೇಧ ಹೇರಿದಂತೆ ಭಾರತ ಸರಕಾರವೂ ಈ ರೀತಿ ಮಾಡುವಲ್ಲಿ ಹೆಜ್ಜೆ ಮುಂದಿಟ್ಟಿರುವುದು ಕಹಿ ಸುದ್ದಿ.
ಆದರೆ ಸಿಹಿ ಸುದ್ದಿ ಏನಪ್ಪಾ ಅಂದ್ರೆ ಬ್ಲಾಗ್‌ಸ್ಪಾಟ್ ಬ್ಲಾಗುಗಳನ್ನು ಬೇರೆ ಕಡೆ ನೋಡಬಹುದಾಗಿದೆ ಎನ್ನುವುದು.
ನಿಮ್ಮ ಬ್ಲಾಗುಗಳನ್ನು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ISP)ಗಳು ಬ್ಲಾಕ್ ಮಾಡಿದ್ದಾರೆಯೇ?
ನೇರವಾಗಿ pkblogs.comಗೆ ಭೇಟಿ ನೀಡಿ. ಅಲ್ಲಿ ನಿಮಗೆ ಬೇಕಾದ ಬ್ಲಾಗಿನ ಯುಆರ್ಎಲ್ (blogspot ಮಾತ್ರ) ದಾಖಲಿಸಿ.
ಈ ಮೂಲಕ ನಿಮಗಿಷ್ಟದ ಬ್ಲಾಗುಗಳನ್ನು, ಅಥವಾ ನಿಮ್ಮದೇ ಬ್ಲಾಗುಗಳನ್ನು ನೋಡಬಹುದು.

ಬೇರೆಯವರ ಬ್ಲಾಗುಗಳನ್ನು ನೋಡಬೇಕಿದ್ದರೆ, ಉದಾಹರಣೆಗೆ ಬೊಗಳೆ ರಗಳೆ ಬ್ಲಾಗನ್ನು ನೋಡಬೇಕಿದ್ದರೆ
http://pkblogs.com/bogaleragale ಈ ರೀತಿ ಟೈಪಿಸಿದರಾಯಿತು. ಬೇರೆ ಬ್ಲಾಗಿಗಾದರೆ ಬೊಗಳೆ ರಗಳೆ ಎಂಬ ರಗಳೆ ಕಿತ್ತು ಹಾಕಿ ಅವರವರ ಯುಆರ್‌ಎಲ್‌ನಲ್ಲಿರುವ ತುಣುಕನ್ನು ಸೇರಿಸಿದರಾಯಿತು. ಅಂದರೆ http://www.pkblogs.com/blogname ಈ ಥರ ಮಾಡಿದರಾಯಿತು.
ಎಲ್ಲರಿಗೂ ಒಳಿತಾಗಲಿ, ಬ್ಲಾಗಿಸುತ್ತಿರಿ, ಬ್ಲಾಗಿ-ಸುತ್ತಿರಿ.....!

ನನ್ನ ಪ್ರಯೋಗ ಯಶಸ್ವಿಯಾಗಿದೆ. ನೀವೂ ಪ್ರಯತ್ನಿಸಿ.
-ಅಸತ್ಯಾನ್ವೇಷಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

15 ಕಾಮೆಂಟ್‌ಗಳು

  1. ಅಸತ್ಯಿಗಳೇ
    ಮಾಹಿತಿ ಕೋಟ್ಟದಕ್ಕೇ ತುಂಬಾ dvಗಳು.

    ಪ್ರತ್ಯುತ್ತರಅಳಿಸಿ
  2. ಮಾಹಿತಿಗೆ ಧನ್ಯವಾದಗಳು. ಆದರೆ ನನಗೊಂದು ಬೇಜಾರೇನಂದ್ರೆ ಇದು ಬೊಗಳೆಯಲ್ಲ ಅನ್ನುವುದು.

    ನಿಮ್ಮಂತಹವರ ಸಂತತಿ ಇನ್ನೂ ಹೆಚ್ಚಾಗಲಿ.

    ಪ್ರತ್ಯುತ್ತರಅಳಿಸಿ
  3. ಓ ಮಹಾಂತೇಶ್ ಮತ್ತು ಮಾವಿನರಸರೆ,
    ಈ ಬಗ್ಗೆ ಸ್ಪಷ್ಟನೆ ಕೊಡೋದನ್ನ ಮರ್ತಿದ್ದೆ.

    ಇದನ್ನು ಬೊಗಳೆ ರಗಳೆ ಬ್ಯುರೋದಿಂದ ಪೋಸ್ಟ್ ಮಾಡಿಲ್ಲ. ಇದಕ್ಕೂ ನಮಗೂ ಏನೂ ಸಂಬಂಧವಿಲ್ಲ ಅಂತ ಸ್ಪಷ್ಟಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  4. ಮಾವಿನರಸರೆ,
    ನೀವು ಸಂತತಿ ಹೆಚ್ಚಾಗಲಿ ಅಂತ ಹೇಳಿದ್ದು ಕೇಳಿ ಭಯವಾಗ್ತಿದೆ.
    ಅದೇ ಸ್ಫೋಟ.....

    ಮುಂಬಯಿ ಸ್ಫೋಟ ಅಲ್ಲ ಸ್ವಾಮೀ... ಯಾಕೆ ಬೆಚ್ಚಿ ಬೀಳ್ತೀರಾ..?

    ಜನಸಂಖ್ಯಾ ಸ್ಫೋಟ ಅಂತ ಮಾತ್ರ ನಾನು ಹೇಳಿದ್ದು.!!!!!

    ಪ್ರತ್ಯುತ್ತರಅಳಿಸಿ
  5. blogspot = ಯೋತ್ಪಾದಕರ, ಷ್ಕರ್-ಎ-ತೊಯಿಬಾಗಳ, ಸಾಮನ, ಗೆರಿಲ್ಲಾಗಳ, ದ್ದಾಮನ, ಪಾಕಿಸ್ತಾನಿಗಳ ಟ್ಟು ಟೆರರಿಸಂ ಅಂತ ಯಾರೋ ದೊಡ್ಡ ರಹಸ್ಯಭೇದಿಸಿದವರಂತೆ ವದಂತಿ ಹಬ್ಬಿಸಿದ್ದರಿಂದ blogspot ಈಗ blackspot ಆಗಿ blockspot ಆಗಿದೆಯಂತೆ.

    ವದಂತಿಗಳು ಮತ್ತು ಅದನ್ನು ಕೇಳುವ ಸರಕಾರ ಚಾಪೆ ಕೆಳಗೆ ತೂರಿದರೆ ಅದಕ್ಕೊಂದು ರಂಗೋಲಿಯ ಕೆಳಗೆ ನುಸುಳುವಂಥ pkblog! (to take a peek at blogs)!!

    ಪ್ರತ್ಯುತ್ತರಅಳಿಸಿ
  6. ಈ ಸುದ್ದಿಯನ್ನು ಎಲ್ಲಿಂದಲೋ ಪೀಕಿಸಿ, ಲೀಕ್ ಮಾಡಿದ್ದೇವೆ ಜೋಷಿ ಅವರೆ,

    ನೀವು ಕೊಟ್ಟ ಫುಲ್ ಫಾರ್ಮ್‌ಗೆ ನಮ್ಮ ಫುಲ್ ಮಾರ್ಕ್ಸ್!
    ಅಂದ್ರೆ ಭಲಒಗೆಸಪಾಟೆ

    ಭಲಾ... ಸಪಾಟ್ ಒಗೆದುಬಿಡು ಅಂತ ಸೂಚನೆ ಇರಬಹುದೇ?
    (ಸಾಪಾಟ್ = ಊಟ/ತಿಂಡಿ ಅಂತ ತಮಿಳಿನಲ್ಲಿ ಅರ್ಥ.)

    ಪ್ರತ್ಯುತ್ತರಅಳಿಸಿ
  7. ಅಸತ್ಯಿಗಳೇ,

    ದುಡ್ಡು ವಾಪಸ್ ಕೊಡ್ರೀ..
    ಎನ್ರೀ ಇದು ಎನೋ ಬೊಗಳೆ ಇರುತ್ತೆ ಅಂತಾ ಇವತ್ತಿನ ಸಂಚಿಕೆ ಖರೀದಿಸಿದರೆ ಈ ತರ ಎಲ್ರಿಗೂ ಬೇಕಾಗಿರೋ ಉಪಯುಕ್ತ ಮಾಹಿತಿ ನೀಡೋದೆ !

    ನಿಮ್ಮಂತಹವರ ಸಂತತಿ ಹೆಚ್ಚಾಗಲಿ..ಎಂದು ತವಿಶ್ರೀಗಳು ಆಶೀರ್ವದಿಸಿದರ ಹಿಂದಿನ ರಹಸ್ಯವೇನು?

    ಪ್ರತ್ಯುತ್ತರಅಳಿಸಿ
  8. ದಯವಿಟ್ಟು ನನ್ ಮಾತ್ನ ನಂಬಿ ಶಿವ್ ಅವರೆ,
    ಸಂತತಿ ಹೆಚ್ಚಾಗಲು ನಾನೇನೂ ಮಾಡ್ಲಿಲ್ಲ...

    ದಯವಿಟ್ಟು ನಂಬಿ, ಈ ಮಾಹಿತಿ ಕೊಟ್ಟಿದ್ದು ನಾವಲ್ಲ, ನಮ್ಮ ವ್ಯಾಪ್ತಿಗೇ ಇಂಥದ್ದು ಬರೋದಿಲ್ಲ. ಯಾರೋ ನಮ್ಮ ಹೆಸರು ಕೆಡಿಸಲಿಕ್ಕೋಸ್ಕರ ಈ ಮಾಹಿತಿ ಕೊಟ್ಟಿದ್ದಾರೆ....!!!!

    ಪ್ರತ್ಯುತ್ತರಅಳಿಸಿ
  9. ನಮಸ್ಕಾರ ಹೊಗೆಸೊಪ್ಪಿನವರಿಗೆ...
    ಚೆನ್ನಾಗಿದ್ದೀರಾ?
    ನಿಮ್ಮ ಪತ್ರ ಬಂದಿದೆ.
    ಆದ್ರೆ ಅದು ಬರಹದಲ್ಲಿದೆ ಅಂತ ಅನ್ಸುತ್ತೆ
    ಬೇರೆ ಸಿಸ್ಟಮ್ ನಲ್ಲಿ ನೋಡುವೆ.
    ಬ್ಲಾಗಿನೊಳಗೆ ಇಣುಕಿದ್ದಕ್ಕೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  10. ಬ್ಲಾಗ್ ಗಳ ಸವಿವರ ಬಹಳ ಚೆನ್ನಾಗಿದೆ. ಮುಂದೆಯೂ ನಿಮ್ಮ ನಿರೀಕ್ಷೆಯಲ್ಲಿ.......

    ಪ್ರತ್ಯುತ್ತರಅಳಿಸಿ
  11. ಹಾಯ್ ಸಾಕ್ಷಿ,
    ನನ್ನ ನಿರೀಕ್ಷೆಯಲ್ಲಿರುವ ನಿಮಗೆ ಸ್ವಾಗತ !!!

    ಪ್ರತ್ಯುತ್ತರಅಳಿಸಿ
  12. ಅನಾನಿಮಸರೇ,
    ದಯವಿಟ್ಟು ನೀವು ಯಾರೂಂತ ತಿಳಿಸಿಬಿಡಿ.
    ನಿಮ್ಮ ಹೊಗಳಿಕೆಗಳಿಂದಾಗಿ ನಮ್ಮ ಇ-ಮೇಲ್ ಇನ್‌ಬಾಕ್ಸ್ ತುಂಬಿ ತುಳುಕಾಡುತ್ತಿದೆ.
    :)

    ಪ್ರತ್ಯುತ್ತರಅಳಿಸಿ
  13. ಹೊಗೆ ಸೊಪ್ಪಿನವರೆ,
    ನಿಮ್ಮ ಕವನ ಓದಲಾಗಿಲ್ಲ. ಆದರೆ ನೀವು ತೋರಿಸಿದ ತಪ್ಪು ತಿಳಿಯಿತು.
    ಸಿಹಿ ಇದ್ದದ್ದು ಸುಹಿ ಆಗಿದೆ. ಆದರೆ ಅದು ಅವಸರದ ಔಷಧವಾಗಿದ್ದರಿಂದ ಕಹಿಯಾಗಲಾರದು ಎಂದು ಭಾವನೆ.
    ಸರಿಪಡಿಸುತ್ತೇನೆ.
    ತಪ್ಪು ತಿಳಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  14. ಹೊಗೆಸೊಪ್ಪಿನವರೆ,

    naanu_nimmavanu@rediffmail.com ಅನ್ನೋದು ನಿಮ್ಮದೇ ತಾನೇ?
    ಅದರಿಂದ ಬಂದ ಮೈಲ್‌ನಲ್ಲಿ ಏನೇನೋ ಅಕ್ಷರಗಳು ಕಾಣಿಸುತ್ತಿವೆ. ಅದು ಯಾವ ಫಾಂಟ್ ಅಂತ ತಿಳಿಯುತ್ತಿಲ್ಲ. ಕವನ ಇರಬಹುದು ಅಂದ್ಕೊಂಡೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D