ಬೊಗಳೆ ರಗಳೆ

header ads

ಟ್ರಾಫಿಕ್ ಜಾಮ್‌ಗೆ ಟ್ರಾಫಿಕಿಂಗೇ ಕಾರಣ!

(ಬೊಗಳೂರು ಟ್ರಾಫಿಕ್ ಬ್ಯುರೋದಿಂದ)
ಬೊಗಳೂರು, ಫೆ.9- ಭಾರತ ದೇಶದಲ್ಲಿ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುವುದಕ್ಕೆ ಪ್ರಮುಖವಾದ ಕಾರಣವೊಂದನ್ನು ಪತ್ತೆ ಹಚ್ಚಲಾಗಿದೆ.

ಹೆಚ್ಚಾಗಿ ಮುಂಬಯಿಯಂತಹ ಮಹಾನಗರಗಳಲ್ಲಿ ಈ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದ್ದರೂ, ಇತ್ತೀಚೆಗಿನ ದಿನಗಳಲ್ಲಿ ವಾಹನಗಳೆಲ್ಲವೂ ಹಳ್ಳಿ ಹಳ್ಳಿಗಳ ಮೂಲೆ ಮೂಲೆಯಿಂದಲೂ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ಕೂಡ ಕಾರಣವಾಗಿದೆ.

ಇದರಿಂದ ಹಳ್ಳಿಗಳು ಕೂಡ ಶ್ರೀಮಂತಿಕೆಯಿಂದ ತುಂಬಿ ತುಳುಕಾಡಲು ಶುರುಹಚ್ಚಿಕೊಂಡಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇತ್ತೀಚೆಗೆ ಆಂಧ್ರಪ್ರದೇಶದಿಂದ ಬರುವ ವಾಹನಗಳಿಂದಾಗಿ ಬೆಂಗಳೂರಿನಲ್ಲೂ ಕೂಡ ಟ್ರಾಫಿಕ್ ಜಾಮ್ ಆಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

  1. ಟ್ರಾಫಿಕಿಂಗ್‍ನಿಂದಾಗಿಯೇ ಟ್ರಾಫಿಕ್ ಜಾಮ್ ಆಗುತ್ತಿದೆ ಎಂಬುದು ಕುಮಾರಣ್ಣನಾಣೆಗೂ ಒಪ್ಪಬೇಕಾದ ಸಂಗತಿ.

    ಜೊತೆಗೆ ಈ ಟ್ರಾಫಿಕಿಂಗ್‍ನಿಂದಾಗಿ ಸವಾರರ ಏಕಾಗ್ರ ತಪಸ್ಸಿಗೆ ಭಂಗವುಂಟಾಗಿ ರಸ್ತೆಯ ಮೇಲೆ ವಾಹನಗಳು ಒಂದಕ್ಕೊಂದು ಗುದ್ದಿಕೊಂಡು ಸವಾರರನ್ನು ನೇರವಾಗಿ ಸ್ವರ್ಗಕ್ಕೂ, ತಮ್ಮನ್ನು ಸರ್ವೀಸ್ ಸ್ಟೇಷನ್‍ಗಳಿಗೂ ರವಾನಿಸಿಕೊಳ್ಳುತ್ತಿವೆ ಎಂಬ ಸ್ಪೂಟಕ ಮಾಹಿತಿ ನಮಗೆ ಮಾತ್ರ ಸಿಕ್ಕಿದೆ.

    ಟ್ರಾಫಿಕ್ಕಿಂಗ್‍ನಿಂದಾಗಿ ಎಚ್‍ಐವಿ ಅಂಬ ನಿರ್ವಸತಿಕರು ಜನರ ದೇಹದಲ್ಲಿ ಸೂರುಕಟ್ಟಿಕೊಳ್ಳುತ್ತಿರುವುದರಿಂದಾಗಿ ಜನಸಂಖ್ಯೇ ಕೂಡಲೇ ನಿಯಂತ್ರಣಕ್ಕೆ ಬಂದು ಟ್ರಾಫಿಕ್ ಕಡಿಮೆಯಾಗುತ್ತೆ ಎಂಬ ಸಂಶೋಧನೆಯನ್ನು ಮಾಡಿ ನೊಬೆಲ್ ಪ್ರಶಸ್ತಿಗಾಗಿ ಕಾಯುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  2. ಏನಾದರಾಗಲಿ... ನನ್ನೂರು ಎಕ್ಕುಟ್ಟಿ ಹೋದರೂ ಪರವಾಗಿಲ್ಲಾ. ಅದರೆ economy ಬೆಳೆಯಬೇಕು ಅದಷ್ಟೆ ನಮ್ಮಂಥ ವಿಚಾರವಾದಿಗಳ ವಿಚಾರ.
    ಟ್ರಾಫಿಕಿಂಗ್ ನಿಂದಾಗಿಯೇ ಟ್ರಾಫಿಕ್ ಜಾಮ್ ಆಗುತ್ತೋ ಇಲ್ವೋ ಗೊತ್ತಿಲ್ಲ economy ಅಂತೂ ಬೆಳೆಯುತ್ತೆ, ಅಲ್ಲಿಗೆ ನಮ್ಮ ಮುಖಂಡರ ಜವಾಬ್ದಾರಿ ಮುಗಿಯಿತು.
    ಟ್ರಾಫಿಕ್ಕಿಂಗ್‍ನಿಂದಾಗಿ ಎಚ್‍ಐವಿ ಅಂಬ ನಿರ್ವಸತಿಕರು ಜನರ ದೇಹದಲ್ಲಿ ಸೂರುಕಟ್ಟಿಕೊಳ್ಳುತ್ತಿವೆಯೇ ???ಆಗಲಿ.
    ನಮ್ಮ ಮೆಡಿಕಲ್ ಉದ್ಯಮ ಕೂಡ ಬೆಳೆಯುತ್ತೆ ಅಲ್ವಾ?
    ಏನಂತೀರಾ ಅನ್ವೇಷಿಗಳೆ?

    ಪ್ರತ್ಯುತ್ತರಅಳಿಸಿ
  3. ಸುಪ್ರೀತರೇ,
    ನಿಮ್ಮ ಅದ್-ಭೂತ ಸಂಶೋಧನಾ ವರದಿಗಳಿಂದ ಬೊಗಳೆ ರಗಳೆ ಬ್ಯುರೋ ಕಂಗೆಟ್ಟಿದೆ. ಹಾಗಾಗಿ ನೀವು ಅರ್ಜಿ ಗುಜರಾಯಿಸಿರುವ ನೋ-ಬೆಲ್ ಪ್ರಶಸ್ತಿಯನ್ನು No-null ಪ್ರಶಸ್ತಿಯಾಗಿಸಲು ಸಂಚು ಹೂಡಲಾಗುತ್ತಿದೆ.

    ಇಲ್ಲಿ ಎಚ್ಐವಿ ತಂದು ಹಾಕಿದ್ದಕ್ಕೆ ಧನ್ಯವಾದ,

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ನಿಮ್ಮ ಮುಂಬಯಿಯಲ್ಲಿ ನಿಮ್ಮ ಕಾಲಬುಡದಲ್ಲೇ ಟ್ರಾಫಿಕಿಂಗ್ ಆಗುತ್ತಿದ್ದು, ನೀವೇ ಟ್ರಾಫಿಕ್ ಕಿಂಗ್ ಅಂತ ಶೀಘ್ರದಲ್ಲೇ ಪತ್ತೆ ಹಚ್ಚಲಿದ್ದೇವೆ.

    ದಯವಿಟ್ಟು be careful ಅಂತ ಪ್ರೀತಿಯಿಂದ ಎಚ್ಚರಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  5. md ಅವರೆ,
    ಬೊಗಳೆ ರಗಳೆ ಬ್ಯುರೋ ಇರುವ ಬೊಗಳೂರು ಎಕ್ಕುಟ್ಟಿಹೋದರೂ ಚಿಂತಿಲ್ಲ ಎಂಬ ನಿಮ್ಮ economical ವಿಚಾರವಾದದಿಂದ ನಮ್ಮೂರಿಗರು ರಣಭಯಂಕರವಾಗಿ ಸಂತಸಗೊಂಡಿದ್ದಾರೆ.

    ಮೆಡಿಕಲ್ ಉದ್ಯಮವನ್ನು ಬೆಳೆಸಲು ನಿಮ್ಮಂತಹ Managing Directorಗಳು ಸಂಚು ರೂಪಿಸುತ್ತಿರುವುದು ಬೆಳಕಿಗೆ ಬಂದಿರುವುದರಿಂದ ಸುಪ್ರೀತರಿಗೆ ಹೇಳಿ ಅವರ ವಿರುದ್ಧ ನಿಮ್ಮನ್ನು ಎತ್ತಿ-ಕುಟ್ಟಲಾಗುತ್ತದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D