Tuesday, March 13, 2007

ಮಂಗಗಳ ಅಂಗಳದಲ್ಲಿ ವಿವಾಹ ಸಂಭ್ರಮ

(ಬೊಗಳೂರು ಮಂಗ ಬ್ಯುರೋದಿಂದ)
ಬೊಗಳೂರು, ಮಾ.13- ಬೆಂಗಳೂರಿನಲ್ಲಿ ನಾಯಿಗಳನ್ನು ಕೊಲ್ಲುತ್ತಾ ಮಾನವರು ದಾನವರಾಗುತ್ತಿರುವಂತೆಯೇ, ಪೂರ್ವಜರು ಕೂಡ ತಾವು ಬಹಳ ಪೂರ್ವಕಾಲದಲ್ಲೇ ಇದ್ದೇವೆ ಎಂಬುದನ್ನು ಅರಿತುಕೊಂಡು, ಮರಳಿ ಮಾನವಸಮುದಾಯಕ್ಕೆ ತಿರುಗಿಬರುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇರಿಸುತ್ತಿದ್ದಾರೆ.

ಈ ರೀತಿ ಮಂಗಗಳ ಅಂಗಳದಲ್ಲಿ ಬಲವಾಗಿ ಹೆಜ್ಜೆ ಊರಿದ ಮೊದಲ ಪರಿಣಾಮವೇ ಮಂಗಗಳ ವಿವಾಹ. ಇತ್ತೀಚೆಗೆ ಕಪ್ಪೆಗಳ ಮದುವೆ, ನಾಯಿಗಳ ಮದುವೆ ಇತ್ಯಾದಿ ನಡೆದಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದ್ದು, ಈ ಸಾಲಿಗೆ ಹೊಸ ಸೇರ್ಪಡೆ ಮಂಗಗಳ ವಿವಾಹ.

ಇದರೊಂದಿಗೆ ಮಂಗ-ಮಾನವ ಸಂಬಂಧಕ್ಕೆ ಹೊಸ ಅರ್ಥವೊಂದನ್ನು ಕಲ್ಪಿಸಲಾಗುತ್ತಿದ್ದು, ಮಂಗನಿಂದ ಮಾನವ ಎಂದಿದ್ದದ್ದನ್ನು ಮಾನವನಿಂದ ಮಂಗ ಎಂದು ತಿರುಗಿಸಲು ಮಂಗ ಸಮುದಾಯವು ಪಣ ತೊಟ್ಟಿರುವುದು ಶಾಂತಿಯ ಭಂಗಕ್ಕೆ ಕಾರಣವಾಗಬಹುದೇ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ಇತ್ತೀಚೆಗೆ ಮಾನವ ಬುದ್ಧಿ ತೋರಿಸಿದ ಶ್ವಾನವನ್ನು ಸಮುದಾಯದಿಂದಲೇ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವುದು. ಇದೀಗ ವಿವಾಹಿತ ಮಂಗ ದಂಪತಿಯನ್ನು ಮಂಗ ಸಮುದಾಯವು ಬಹಿಷ್ಕರಿಸಲಿದೆಯೇ ಎಂದು ಕಾದು ನೋಡಲಾಗುತ್ತಿದೆ.

ಆದರೆ ವಿವಾಹವಾದ ಬಳಿಕ ವಿವಾದ ಇದ್ದದ್ದೇ ಎಂಬ ಅಲಿಖಿತ ನಿಯಮವು ಮಂಗಗಳ ಮಟ್ಟಿಗೆ ಇದುವರೆಗೆ ಅನ್ವಯವಾಗಿಲ್ಲ. ಕಾಲಾನಂತರದಲ್ಲಿ ಸಂಸಾರ ಸಾಗರದಲ್ಲಿ ಈಜುತ್ತಿರುವ ಹಂತದಲ್ಲಿ ಇದು ಗೋಚರಕ್ಕೆ ಬರಬಹುದು, ಅಂತೆಯೇ ಮಂಗಗಳ ಕಿರ್ರ್...ಕಿರ್ರ್... ಧ್ವನಿಯು ಊರವರ ನಿದ್ದೆ ಕೆಡಿಸಲಿದೆಯೇ ಎಂಬ ಬಗ್ಗೆ ಈಗಾಗಲೇ ಭರದಿಂದ ಯೋಚನೆ-ಯೋಜನೆಗಳನ್ನು ಲೆಕ್ಕಾಚಾರ ಹಾಕಲಾಗುತ್ತಿದೆ.

ಡಿಸ್ಕ್ ಕ್ಲೈಮರ್ : ಈ ವರದಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಾರಿ ಮಂಗ ಮಂಗ ಮಂಗ ಮಂಗ ಎಂಬ ಪದವನ್ನು ಬಳಸಿದ್ದರೆ ಅದಕ್ಕೆ ಯಾರು ಕೂಡ ಜವಾಬ್ದಾರರಲ್ಲ- ಅಸತ್ಯಾನ್ವೇಷಿ
------------------------------------
ಮನವಿ

ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಲು ಕೋರಿಕೆ.

4 comments:

 1. " ಮಂಗಗಳಲ್ಲೆವೂ ಸೇರಿದವು ಒಂದು ವಿವಾಹ ವ ಮಾಡಿದವು!!" ಅಂತ ಮಂಗಗಳು ಹಾಡಿಕೊಳ್ಳುತ್ತಿರಬೇಕು!! ನಿಮ್ಮ ಮಂಗ ನ ಮದುವೆ ಯಾವಾಗ ಅನ್ವೇಷಿಗಳೇ??!!

  ReplyDelete
 2. yatihvಎಷ್ಟೇ ಆಗಲಿ ಮಂಗಗಳು ಮಾನವರ ಪೂರ್ವಜರಲ್ಲವೇ? ಅವರು ಮಾಡಿದ್ದನ್ನೇ ನಾವು ಮಾಡಬೇಕು. ಮೊದಲು ಮಂಗಗಳಿಗೆ ಮದುವೆ ಆದರೆ, ನಂತರ ಮಾನವನಿಗೆ ಮದುವೆ.
  ಕದಳೀ ವನದಲ್ಲಿ ಭೋಜನ ಏರ್ಪಾಡಾಗಿದೆಯಂತೆ.

  ಅಂದ ಹಾಗೆ ಮೆನು ಏನು ಎಂದು ತಿಳಿಯಿತಾ?

  ReplyDelete
 3. ಅನಾನಿಮಸ್ಗಿರಿಯವರೆ,
  ಮಂಗಗಳು ಉಪವಾಸ ಮಾಡಿ ಬಾಳೆ ಹಣ್ಣು ತಿಂದ ಕ್ರಮವನ್ನೇ ಈ ವಿವಾಹದಲ್ಲೂ ಅನುಸರಿಸಿದರೆ ಏನು ಗತಿ ಎಂಬ ಬಲುದೊಡ್ಡ ಶಂಕೆ ಉದ್ಭವಿಸಿರುವುದರಿಂದ ನಮ್ಮ ಮಂಗನಿಗೆ ಮದುವೆ ಮಾಡದಿರಲು ತೀರ್ಮಾನಿಸಿದ್ದೇವೆ. ಆದರೆ ಆ ಮಂಗನೇ ಮದುವೆಯಾಗಲು ಹೊರಟರೆ ನಾವು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

  ReplyDelete
 4. ಶ್ರೀನಿವಾಸರೆ,
  ನೀವು ಹೇಳಿದ "yatihvಎಷ್ಟೇ" ಎಂಬುದರ ಅರ್ಥವಾಗಿಲ್ಲ. ಬಹುಷಃ ಅದು ಕಪಿಚೇಷ್ಟೆ ಎಂಬುದರ ಮತ್ತೊಂದು ರೂಪ ಇರಬಹುದೇ?

  ಮಂಗಗಳ ಮದುವೆಯ ಮೆನು "ಹೇನು"!!

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...