Friday, March 09, 2012

ಮಹಿಳಾ ದಿನ ವಿಶೇಷ ಬೊಗಳೆ: ಸಬಲೆಯರಾಗಿಲ್ಲವೇ?


[ಬೊಗಳೂರು ಮಹಿಳಾ ಬ್ಯುರೋದಿಂದ]
ಬೊಗಳೂರು, ಮಾ.9- ಮಹಿಳೆಯರಿನ್ನೂ ಸಬಲೆಯರಾಗಿಲ್ಲ, ಅಬಲೆಯರಾಗಿಯೇ ಇದ್ದಾರೆ ಎಂದೆಲ್ಲಾ ಮಹಿಳಾ ದಿನಾಚರಣೆಯಂದು ಮಾತ್ರವೇ ಕೇಳಿ ಬರುತ್ತಿದ್ದ ಮಾತುಗಳು ಗುರುವಾರ (ಮಾರ್ಚ್ 8, 2012) ಕೂಡ ಕೇಳಿಬಂದವು.

ಈ ಕುರಿತು ತನಿಖೆ ನಡೆಸಿ ಜನತೆಯೆದುರು ಅಸತ್ಯವನ್ನೇ ಮುಂದಿಡೋಣ ಎಂದುಕೊಂಡು, ಸೊಂಪಾದಕರಿಂದ ಅನುಜ್ಞೆಯನ್ನು ಪಡೆದುಕೊಂಡು ಹೊರಟ ಬೊಗಳೆ ರಗಳೆ ಬ್ಯುರೋಗೆ ಹಲವಾರು ದೃಶ್ಯಗಳು ಕಣ್ಣಿಗೆ ಬಿದ್ದಾಗ, ವರದ್ದಿ ತಂದು ಒಪ್ಪಿಸುವುದು ಹೇಗೆ ಎಂಬ ಗೊಂದಲವಾಯಿತು.

ಬೊಗಳೂರಿನಲ್ಲಿ ಹೀಗೆಯೇ ಸುತ್ತಾಡುತ್ತಿದ್ದಾಗ, ಹೋಳಿ ಹಬ್ಬವೂ ಕಣ್ಣಿಗೆ ರಾಚಿ, ಬೊಗಳೂರು ಇಡೀ ಬಣ್ಣದ ಓಕುಳಿ ಮತ್ತು ಬಣ್ಣದ ಪುಡಿಗಳಿಂದಲೇ ಮಿಶ್ರಿತವಾಗಿದ್ದವು. ಆದರೆ, ಈ ಬಣ್ಣಗಳನ್ನು ಮೆತ್ತುವವರು ಮತ್ತು ಮೆತ್ತಿಸಿಕೊಳ್ಳುವವರು ಪುರುಷರೋ, ಮಹಿಳೆಯರೋ ಎಂಬುದು ತಿಳಿಯದೆ ಗೊಂದಲವಾಯಿತು. ಯಾಕೆಂದರೆ, ತಲೆ ಕೂದಲು ಕೆರೆದುಕೊಂಡು, ಚಿತ್ರವಿಚಿತ್ರ ಡ್ರೆಸ್ ತೊಟ್ಟುಕೊಂಡು, ಎದುರಲ್ಲಿದ್ದವರನ್ನು ಅಟ್ಟಾಡಿಸಿಕೊಂಡು ಹೋಗುವವರೆಲ್ಲರೂ ಕಣ್ಣಿಗೆ ರಾಚಿದರು.

ಇವರು ಪುರುಷರೋ ಅಥವಾ ಮಹಿಳೆಯರೋ ಎಂಬುದು ಗೊಂದಲವಾಯಿತು. ಯಾಕೆಂದರೆ ಉಡುಗೆಯಲ್ಲಿ ಪುರುಷನೋ, ಮಹಿಳೆಯೋ ಎಂದು ಗುರುತಿಸುವುದು ಸಾಧ್ಯವಿಲ್ಲದಂತಹಾ ಪರಿಸ್ಥಿತಿ. ಹುಡುಗರಿಗೂ ಉದ್ದ ತಲೆಕೂದಲಿರುತ್ತದೆ. ಎಲ್ಲರೂ ಪ್ಯಾಂಟು ಶರಟು ಧರಿಸುತ್ತಾರೆ. ಹಾಗಿದ್ದರೆ ಯಾವ ರೀತಿ ವರದ್ದಿ ತಂದೊಪ್ಪಿಸುವುದು ಎಂದು ಯೋಚಿಸಿದ ಬಳಿಕ, ಸಂಜೆಯವರೆಗೂ, ರಾತ್ರಿಯವರೆಗೂ ಕಾದು ಕೊನೆಗೂ ವರದ್ದಿ ಸುರಿಯಲು ನಿರ್ಧರಿಸಲಾಯಿತು.

ಕೊನೆಗೂ ಕಷ್ಟ ಪಟ್ಟು ಸಂಪಾದಿಸಿದ ಆ ಒಂದು ಸಾಲಿನ ಬ್ರೇಕಿಂಗ್ ನ್ಯೂಸ್ ಇಲ್ಲಿದೆ:
ಯಾವುದೇ ಮಹಿಳೆಯರು ಮಹಿಳಾ ದಿನದಂದು ನಮಗೆ ಪಾರ್ಟಿ ಕೊಡಿಸಿಲ್ಲವಾದುದರಿಂದ, ಅವರಿನ್ನೂ ಸಬಲೆಯರಾಗಿಲ್ಲ. ಅವರು ಮತ್ತಷ್ಟು ಸಬಲೆಯರಾಗಬೇಕಾದ ಅನಿವಾರ್ಯತೆ ಇದೆ!

8 comments:

 1. ನಿಮ್ಮ 'ವಿವಾದ' ಸರಿಯಾಗಿದೆ. ಅಪರೂಪಕ್ಕೆ ಅಸತ್ಯವನ್ನು ಕಷ್ಟಪಟ್ಟು ಹೇಳಿದ್ದೀರಿ !.

  ReplyDelete
  Replies
  1. ಸುಬ್ರಹ್ಮಣ್ಯರೇ, ನಮ್ಮ ವಿ(ತಂಡ)ವಾದಕ್ಕೆ ಎಲ್ಲಿ ಬೆಲೆಯಿದೆ!!! ಇನ್ನೂ ಪಾರ್ಟಿ ಬಂದಿಲ್ಲ.

   Delete
 2. ಪಾರ್ಟೀ ಕೊಡಿಸೋಣವೆ೦ತಲೇ ಮಹಿಳೆಯರೆಲ್ಲಾ ಅನ್ವೇಶಿಗಳನ್ನು ಹುಡುಕುತ್ತಾ ಮೂಲೆ ಮೂಲೆ ಅಲೆದರೂ ಸಿಗದಿರಲು, ನೀವು ಒ೦ದು ಸಾಲಿನ ಬ್ರೇಕಿಂಗ್ ನ್ಯೂಸ್ ಗಾಗಿ ಹುಡುಕುತ್ತಾ ಕಾಣೆಯಾದದ್ದೇ ಕಾರಣ ಎ೦ದು ಈಗ ಗೊತ್ತಾಯಿತು....

  ReplyDelete
  Replies
  1. ಚುಕ್ಕಿಗಳೇ ಚಿತ್ತಾರರೇ, ಮೊದ್ಲೇ ಹೇಳ್ಬಾರ್ದಾ... ಪಾರ್ಟಿ ಕೊಡಿಸಕ್ಕೋಸ್ಕರ ಹುಡುಕ್ತಿದೀವಿ ಅಂತ... ಹೇಗಾದ್ರೂ, ಏನಾದ್ರೂ ಮಾಡಿ ಬರ್ತಿದ್ದೆವು...

   Delete
 3. ನೀವು ಐ.ಟಿ ಉದ್ಯಮದಲ್ಲಿರುವ, ಐ.ಫೈ ಆಗಿರುವ, ಮಾತಿಗೆ ಮುಂಚೆ ನಾವು ಯಾರಿಗೇನೂ ಕಮ್ಮಿ ಇಲ್ಲ...ಅನ್ನುವ ಸಬಲೆಯರದ ಮಹಿಳಾ ಮಣಿಗಳನ್ನು ಭೇಟಿ ಮಾಡಲ್ಲಿಲ್ಲ ಅಂತ ಕಾಣುತ್ತೆ,
  ಅದಕ್ಕೆ ಪಾರ್ಟಿ ಸಿಕ್ಕಲ್ಲಿಲ್ಲ............

  ReplyDelete
  Replies
  1. ಬಾಬು ಶಂಕರರೇ, ಬೊಗಳೂರಿಗೆ ಸ್ವಾಗತ....
   ಅದೇನೋ ಐಟಿ ಸಿಟಿಯಲ್ಲಿ ಬ್ಲೂ-ಫೈ ಅಂತ ಶುರುವಾಗಿದೆಯಂತಪ್ಪಾ... ನಂಗಂತೂ ಅದೇನು ಬ್ಲೂ ಅಂತ ಗೊತ್ತಾಗಿಲ್ಲ...

   Delete
 4. ಅಯ್ಯೋ ಅನ್ವೇಷಿಗಳೇ, ಸಬಲೆಯರೆಲ್ಲಾ ನಿಮಗಾಗಿ ಪಬ್ಬುಗಳಲ್ಲಿ ಕಾಯುತ್ತ ಕೂತಿದ್ದರಂತೆ. ನೀವು ಎಲ್ಲೆಲ್ಲೋ ಹುದುಕಿದರೆ ಹೇಗೆ?

  ReplyDelete
  Replies
  1. ಸುನಾಥರೇ,
   ಸಬಲೆಯರು ಪಬ್ಬುಗಳಲ್ಲಿ ಬಲೆ ಹಿಡಿದು ಕಾದು ಕೂತಿದ್ದು ಯಾವ ಕಾರಣಕ್ಕೆ ಅಂತ ಗೊತ್ತಾಗಿಯೇ, ತದುಕಿಸಿಕೊಂಡು ಅಪ್ಪಚ್ಚಿಯಾಗದಂತೆ ನಾವು ನಮ್ಮನ್ನು ರಕ್ಷಿಸಿಕೊಂಡಿದ್ದೇವೆ...

   Delete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...