Thursday, August 31, 2006

ಮಿಗ್ ವಿಮಾನ ಪತನ ರಹಸ್ಯ ಬಯಲು

(ಬೊಗಳೂರು some-ಶೋಧನಾ ಬ್ಯುರೋದಿಂದ)
ಬೊಗಳೂರು, ಆ.31- ಭಾರತದಲ್ಲಿ ಆಗಾಗ್ಗೆ "ಮಿಗ್ ವಿಮಾನ ಪತನ. ಪೈಲಟ್ ಸಾವು"; "ಮಿಗ್ ಪತನ, ಪೈಲಟ್ ಪಾರು" ಎಂಬೋ ಸುದ್ದಿಗಳನ್ನು ನಾವು ಓದುತ್ತಿರುತ್ತೇವೆ. ಇದರ ಹಿಂದಿನ ರಹಸ್ಯ ಬಯಲಾಗಿದೆ.

ಈ ರಹಸ್ಯ ಬಯಲಾಗಲು ಕಾರಣ ಮತ್ತೊಂದು ರಹಸ್ಯವೇ ಆಗಿದೆ ಎನ್ನುವುದು ವಿಶೇಷ. ಈ ರಹಸ್ಯ ಶೋಧಕ್ಕೆ ಹರಸಾಹಸ ಮಾಡಿದಾಗ ಈ ವಿಷ್ಯಾ ಬೆಳಕಿಗೆ ಬಂತು.

ಇಲ್ಲೊಂದು ಸುದ್ದಿ ಪ್ರಕಟವಾಗಿತ್ತು. ಅದರ ಹಿಂದೆ ಅಸತ್ಯಾನ್ವೇಷಣೆಗೆ ಹೊರಟಾಗ ಸಿಕ್ಕಿದ್ದು ಬರೀ ಬೊಗಳೆ ಎಂದು ತಳ್ಳಿ ಹಾಕುವಂತಿಲ್ಲ.

ಈಜುಡುಗೆ ಧರಿಸಿದ್ದ ನಟಿಯೊಬ್ಬಳನ್ನು ನೋಡಿದ ಹೆಲಿಕಾಪ್ಟರ್ ದಿಢೀರನೆ ಕೆಳಗೆ ಉರುಳಿ ಬಿದ್ದದ್ದು ಈಗ ಸದ್ದು ಮಾಡಿರುವ ಸುದ್ದಿ. ಈಕೆಯ ಉಡುಗೆಯ ಪ್ರಮಾಣವನ್ನು ನೋಡುವಾಗ ಬಹುಶಃ ಹೆಲಿಕ್ಆಫ್‌ಟರ್ ಆಫ್! ತಲೆ ಟರಟರನೆ ತಿರುಗಿ ಬಿದ್ದೇ ಬಿಟ್ಟಿತು!

ಆಕೆಯ ತಕ್ಷಣದ ಪ್ರತಿಕ್ರಿಯೆ ಕೂಡ ಅದ್ಭುತವಾಗಿದೆ. ಹೆಲಿಕಾಪ್ಟರ್ ಬಿತ್ತು, ನೋಡಿದಾಗ ಬಟ್ಟೆ ಇರಲಿಲ್ಲ. ದಯವಿಟ್ಟು ಕ್ಷಮಿಸಿ, ಯಾರಾದ್ರೂ ನಂಗೆ ಬಟ್ಟೆ ತೊಡಿಸ್ತೀರಾ? ಅಂತ ಆಕೆ ಕೇಳಿದ್ದಾಳೆ.

ಇನ್ನು ಭಾರತದ ವಿಷ್ಯ. ಭಾರತದಲ್ಲಿ ದೇಶ ವಿದೇಶಗಳಿಂದ ನಟಿಯರು ಆಮದಾಗುತ್ತಿರುತ್ತಾರೆ, ಕನಿಷ್ಠ ಉಡುಗೆ ತೊಡುವುದರಲ್ಲಿ ನಂ.1 ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿರುತ್ತದೆ. ಈ ಹಂತದಲ್ಲಿ ಮಿಗ್ ವಿಮಾನಗಳು ಕೂಡ ಆಗಸದಲ್ಲಿ ಬ್ಲಾಗಿಂಗ್, ಸರ್ಚಿಂಗ್.... ಇತ್ಯಾದಿ ಕಾರ್ಯಾಚರಣೆಯಲ್ಲಿ ತೊಡಗಿರುತ್ತವೆ.

ಮಿಗ್ ವಿಮಾನಗಳಿಗೆ ಈ ಬಿಚ್ಚು ಮನಸ್ಸಿನ ಬಿಚ್ಚಮ್ಮರ ಕನಿಷ್ಠ ಉಡುಗೆ ಕಂಡಿರಬೇಕು, ಅವುಗಳಿಗೆ ಕಂಡಿರದಿದ್ದರೂ ಅದರೊಳಗೆ ದುರ್ಬೀನು ಇಟ್ಟುಕೊಂಡು ನೋಡುತ್ತಿರುವ ಪೈಲಟ್‌ಗಳಿಗಾದರೂ ಕಂಡಿರಬೇಕು. ನೋಡಬಾರದ್ದನ್ನು ಅವರು ನೋಡಿರಬೇಕು. ಹಾಗಾಗಿ... ತಗೊಳ್ಳಿ.... ಅಮಲೇರಿ ಬಿದ್ದೇಬಿಟ್ಟವು.

ಈ ಸಂಶೋಧನಾ ಸುದ್ದಿಯನ್ನು ಈಗಾಗಲೇ ಮಿಗ್ ಪತನದಿಂದ ಕಳವಳಗೊಂಡಿರುವ ಕೇಂದ್ರ ಶಿಕ್ಷ-ರಕ್ಷಣಾ ಸಚಿವರಿಗೆ ಕಳುಹಿಸಲಾಗಿದೆ. ನೊಬೆಲ್ ಪ್ರಶಸ್ತಿಗಾಗಿ ಕಾಯಲಾಗುತ್ತಿದೆ.

6 comments:

 1. ಮೊದಲನೇ ಕೊಂಡಿ ಕೆಲ್ಸ ಮಾಡ್ತ ಇಲ್ಲ :(

  ನೆರೆ ದೇಶದ, ವಿಮನಗಳನ್ನು ಉರುಳಿಸಲು ನಮ್ಮ ಬತ್ತಳಿಕೆಯಲ್ಲಿ ಹಲವಾರು, ಬಾಣಗಳಿದೆ ಅಂದ್ ಹಾಗಾಯ್ತು :)

  ಭೂತ

  ReplyDelete
 2. ಭೂತೋತ್ತಮರೆ,
  ತಿಳಿಸಿದ್ದಕ್ಕೆ ಧನ್ಯವಾದ.
  ಈಗ ನಿಮ್ಮ ಕೊಂಡಿಯನ್ನು ಕ್ಲಿಕ್ಕಿಸಿ...

  ಬತ್ತಳಿಕೆಯಲ್ಲಿರೋ ಬಾಣಗಳು ಲೆಕ್ಕಕ್ಕೇ ಸಿಗೋದಿಲ್ಲ... ಕೆಲವನ್ನು ಹೊರದೇಶಗಳಿಗೆ ಈಗಾಗಲೇ ರವಾನಿಸಲಾಗಿದೆ (ನೆಗರ್ ಖಾನ್) ಎಂಬುದು ಗೊತ್ತಲ್ವಾ... ಕೆಲವನ್ನು ವಾಪಸ್ (ಮೋನಿಕಾ ಬೇಡಿ) ಕರೆಸಲಾಗಿದೆ.

  ReplyDelete
 3. ಬಿಚ್ಚಮ್ಮನವರನ್ನು ನೋಡಿದಾಕ್ಷಣ ಮಿಗ್ಗು, ಹೇಲ್ ಕಾಪ್ಟರು ಬೀಳೋದೇ? ಕಲಿಗಾಲವಯ್ಯ ಕಲಿಗಾಲ. ಯಂತ್ರಗಳಿಗೂ ಮಾನವಿಯರ ಆಕರ್ಷಣೇಯೇ? ಈ ಹಾಳು ಮೂಳಿಗಳು ಅದೇನೋ ಮೋಡಿ ಮಾಡ್ತಾರೋ ಏನ್ಕಥೆಯೋ?

  ಅದೇನೋ ಕಾನು, ಬೇದಿ ಅಂತಿದ್ದೀರಲ್ಲ, ಇವರೂ ಸಾಕಿ ತರಹದವರೇನಾ? ಇಂತಹವರು ನಮ್ಮ ದೇಶದ ರಕ್ಷಣಾ ಪಡೆಯಲ್ಲಿದ್ದರೆ ಬಹಳ ಒಳ್ಳೆಯದು. ಶತೃ ದೇಶದವರುಗಳ ಮಾನವನ್ನೆಲ್ಲಾ ಬಡಿದುರುಳಿಸಬಹುದು.

  ಅಂದ ಹಾಗೆ ನಿನ್ನೆಯ ವಿಶೇಷ ಪಾರ್ಟಿ ಹೇಗಿತ್ತು. ಪಬ್ಬಣ್ಣನವರು ಬಂದಿದ್ರಾ? ಗಟಾರಿ ಅಮಾವಾಸ್ಯೆ ಆಯ್ತಾ?

  ReplyDelete
 4. ಹೆಂಡ ಕುಡಿಯದವರಿಗೇಕೆ ಪಬ್ಬಿನ ಬಗ್ಗೆ ಅತೀವ ಆಸಕ್ತಿ?

  ಹೆಂಡ ಕುಡಿಯದೇ ಮಿಗ್‌ಗಳು ಉರುಳುತ್ತಿವೆಯಲ್ಲ?

  -ಪಬ್

  ReplyDelete
 5. ಮಾವಿನಯನಸರೆ,
  ನಿಮ್ಮ ಸಂಶೋಧನಾತ್ಮಕ ಸಲಹೆಯನ್ನು ನಮ್ಮ ಸೇನಾಪಡೆಗಳಿಗೆ ರವಾನಿಸಲಾಗುತ್ತದೆ.

  ಆಮೇಲೆ, ನಿನ್ನೆ ಸಖತ್ ಪಾರ್ಟಿ ಆಯೋಜಿಸಿ, ಎಲ್ಲರನ್ನೂ ಐದು ನಿಮಿಷದೊಳಗೆ ಬರುವಂತೆ ಸೂಚನೆ ನೀಡಿದ್ದೆ.... ಯಾರೂ ಬಂದಿರಲಿಲ್ಲ... ಮತ್ತೆ ಎಲ್ಲಾ ನಮ್ಮ ಬ್ಯುರೋದಲ್ಲಿ ಏಕಾಂಗಿಯಾಗಿದ್ದ ನಾನು ಸಹಿತ ಎಲ್ಲರೂ ತಿಂದದ್ದು, ಕುಡಿದದ್ದು... ಅದೇನೋ ಗಟಾರ ಕಾಣಿಸಲೇ ಇಲ್ಲ...

  ReplyDelete
 6. ಪಬ್ಬೋತ್ತಮರೇ,

  ಹೆಂಡ-ತಿ-ಗಣೆಗಳಿಂದ ದೂರವಿರಲು ಅಗತ್ಯ ಅಂತ ಕೇಳಿದ್ದೇವಾದುದರಿಂದ ಅದರ ಬಗ್ಗೆ ಕುತೂಹಲ.

  ಮಿಗ್‌ಗಳು ಮಾದಕ ದ್ರವ್ಯ ಸೇವಿಸಿಲ್ಲ, ಮಾದಕ ವಸ್ತು ಮಾತ್ರ ನೋಡಿದ್ ತಕ್ಷಣ ಕಣ್ಣು ಕತ್ತಲೆ ಬಂದು ಉರುಳಿಬಿದ್ದವು.

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...