Monday, September 04, 2006

ಕಿಸ್ ನೇ ಕಿಸ್ ಕೋ ಕಿಸ್ ದಿಯಾ!

(ಬೊಗಳೂರು ತುಂಟರ ಬ್ಯುರೋದಿಂದ)
ಬೊಗಳೂರು, ಸೆ.4- ನಿಮ್ಮ ವಾಹನ ಕೆಟ್ಟು ಹೋಗಿ ಅಥವಾ ಅಥವಾ ಗ್ಯಾಸ್ ಸ್ಟವ್ ಕೈಕೊಟ್ಟು... ಏನಾದರೂ ಕಿಸ್sssss ಎಂದು ಸದ್ದು ಮಾಡಿತೋ.... ಅಂಥ ಸದ್ದು ಕೇಳಿದ ತಕ್ಷಣ ಕಿಸಕ್ಕನೇ ನಕ್ಕು ಧಾವಿಸಿ ಬರುವ ಮತ್ತು ಪರದೆ ಮೇಲೆ ಕಿಸ್ ನೀಡುವಲ್ಲಿ ದಾಖಲೆ ಮಾಡಲು ಹೊರಟಿರುವ ಮಲ್ಲಿಕಾ ಶರ್‌ಮಾಮತ್ ಎಂಬ ಬೆಡಗಿ ಪ್ರಜ್ಞೆ ತಪ್ಪಿ ಬೀಳಲು ಆಕೆ ಚಳಿಯಲ್ಲಿ ನಡುಗಿದ್ದು ಕಾರಣ ಅಲ್ಲ ಎಂಬುದು ನಮ್ಮ ಬ್ಯುರೋದ ತನಿಖೆಯಿಂದ ನೆಗೆದುಬಿದ್ದಿದೆ.
 
ಶರ್‌ಮಾಮತ್‌ಗೆ ಕಿಸ್ ಕೊಡುವುದರಲ್ಲಿ ಹಾಗೂ ಬಟ್ಟೆ ತೊಡುವುದರಲ್ಲಿ ಶರಮ್ ಇರುವುದಿಲ್ಲ ಎಂದು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಆಕೆಯ ಮನೆಯವರು ಈ ಥರಾ ನಾಮಕರಣ ಮಾಡಿದ್ದಾರೆ ಎಂದು basic ತನಿಖೆ ಶ್ರುತಪಡಿಸಿತ್ತು.
 
ಅದು ಕೂಡ ಸೈಡ್ ಎಫೆಕ್ಟ್ ಎಂಬ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹೀಗಾಯಿತು ಎಂಬ ಸುದ್ದಿ ಇರುವುದರಿಂದ, ಕಿಸ್ ಕಿಸ್ ನೇ ಕಿಸ್ ಕೋ ಕಿಸ್ ದಿಯಾ ಎಂಬುದೇ ತಿಳಿಯದೆ ಆದ ಸೈಡ್ ಎಫೆಕ್ಟ್ ಎಂದು ಭಾವಿಸಲಾಗಿದೆ.
 
ದಾಖಲೆ ಕಿಸ್‌ ಮಾಡುವ ಧಾವಂತದಲ್ಲಿ ಆಕೆ ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಳು ಎಂಬುದನ್ನು ಕಂಡು ಕೊಂಡ ಅನ್ವೇಷಕರ ತಂಡವು, ಇದರಲ್ಲಿ ಆಕೆಯ ಜತೆ ಪಾಲ್ಗೊಂಡಿದ್ದ ನಟ ರಾಹುಲ್ ಬೋಸ್‌ನ ಯಾವುದೇ ಕಿತಾಪತಿ ಇರಲಿಲ್ಲವೇ ಎಂಬುದನ್ನು ಪತ್ತೆ ಹಚ್ಚುವ ಸಾಹಸಕ್ಕೆ ಹೋಗಿಲ್ಲ.
 
ಮತ್ತೊಂದು ಸಂದೇಹದ ಪ್ರಕಾರ, ಕಿಸ್ ಕೊಡು-ಕೊಳ್ಳುವಿಕೆಯಲ್ಲಿ ಮುಂದೆ ಯಾರೂ ತನ್ನ ದಾಖಲೆ ಮುರಿಯಬಾರದು ಎಂಬ ಕಾರಣಕ್ಕೆ ಆಕೆ, ಕಿಸ್ ಕೊಟ್ಟರೆ ಪ್ರಜ್ಞೆ ತಪ್ಪುತ್ತದೆ ಎಂದು ಇತರ ಬಿಚ್ಚೋಲೆ ನಟೀಮಣಿಯರಿಗೆ ಸಂದೇಶ ಮುಟ್ಟಿಸಲು ಯತ್ನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
 
ಮತ್ತೂ ಒಂದು ಶಂಕೆಯಿದೆ. ಇದು ಪ್ಯಾರ್ ಕೇ ಸೈಡ್ ಎಫೆಕ್ಟ್ ಹೆಸರಿನ ಚಿತ್ರವಾಗಿರುವುದರಿಂದ ಆ ಚಿತ್ರದಲ್ಲಿ ನಟನೆಯಲ್ಲಿ ತನ್ನನ್ನು ಪೂರ್ತಿಯಾಗಿ ಮಗ್ನವಾಗಿಸಿಕೊಳ್ಳುವ ನಿಟ್ಟಿನಲ್ಲಿ ಆಕೆ ಮುಂದುವರಿದಾಗ ಪ್ರಜ್ಞೆ ಇರುವ ನರ(nerve) ಕಟ್ ಆಯಿತು ಎನ್ನಲಾಗುತ್ತಿದೆ.
 
ಆದರೆ, ಬಲ್ಲವರ ಪ್ರಕಾರ, ಚೊಚ್ಚಲ ಚಿತ್ರ "ಖ್ವಾಯಿಷ್‌"ನಲ್ಲಿ 17 ಕಿಸ್ ಮೂಲಕ ದಾಖಲೆ ಮಾಡಿದ್ದ ಆಕೆಯ ಪ್ರಜ್ಞೆ ಇರುವ ನರ ಯಾವತ್ತೋ ಕಟ್ ಆಗಿರುವುದರಿಂದ ಮೈಮೇಲೆ ಅರಿವೆ (ವಸ್ತ್ರ) ಇರುವ ಅರಿವೇ ಇರುವುದಿಲ್ಲ. ಅದಕ್ಕಾಗಿ ಆಕೆಗೆ "ಎಲ್ಲಿ ಜಾರಿತೋ...ಅರಿವೇ... ಎಲ್ಲೆ ಮೀರಿತೋ" ಎಂಬ ಹಾಡು ತುಂಬಾ ಇಷ್ಟ ಅಂತಾನೂ ತಿಳಿದುಬಂದಿದೆ.
 
ಈ ಮಧ್ಯೆ, ಇ-ಕಿಸ್‌ಗಳು ಇಲ್ಲಿ ಉಚಿತವಾಗಿ ಸಿಗುವುದರಿಂದ ಆಕೆಗೆ ಇಲ್ಲಿಂದಲೂ ಸಾಕಷ್ಟು ಕಿಸ್‌ಗಳ ರವಾನೆಯಾಗುತ್ತಿವೆ ಎಂದು ತಿಳಿದುಬಂದಿದೆ.

8 comments:

 1. ತುಂಬ ಚಿಂತೆಯಲ್ಲಿರುವ ಹಾಗಿದೆಯಲ್ಲ? ಯಾಕೆ? ರಾಹುಲ್ ಬೋಸ್ ಬದಲಿಗೆ ಅಲ್ಲಿ ನಾನಿರಬೇಕಿತ್ತು ಎಂದು ಯೋಚಿಸುತ್ತಿದ್ದೀರಾ? ನಿಮ್ಮೆಲ್ಲ ಚಿಂತೆಗಳು ಮಲ್ಲಿಕಾಳ ಡ್ರೆಸ್ ತರಹ ಆಡಷ್ಟು ಕಡಿಮೆಯಾಗಲಿ ಎಂದು ಹಾರೈಸುತ್ತೇನೆ.

  -ಪಬ್

  ReplyDelete
 2. ನಮ್ಮ ಬ್ಯೂರೋವಿನ ಮಾಹಿತಿಯ ಪ್ರಕಾರ ಮಲ್ಲಮ್ಮನಿಗೆ ಮತ್ತು ಸಾಕಮ್ಮನವರುಗಳಿಗೆ ಬೆಳ್ಗಿನ ಖಾಯಿಲೆಯಂತೆ. ಆದ್ದರಿಂದ ಆಗಾಗ್ಯೆ ಪ್ರಜ್ಞೆ ತಪ್ಪುವುದು ಸಾಮಾನ್ಯದ ಸಂಗತಿ. ಇದರ ಬಗ್ಗೆ ಸಾರ್ವಜನಿಕರು ತಮ್ಮಿಂದ ತಪ್ಪಾಗಿರಬಹುದೆಂದು ಹೆದರುವ ಅವಶ್ಯಕತೆ ಇಲ್ಲ.

  ಇದರಲ್ಲಿ ಬೊ-ರಣ್ಣನವರ ಕೈವಾಡವಿರಬಹುದೆಂದು ಯಾರೂ ತಪ್ಪು ತಿಳಿಯಬಾರದು

  ReplyDelete
 3. ಪಬ್ಬೋತ್ತಮರೆ,
  ನಮ್ಮ ಬಗೆಗಿನ ನಿಮ್ಮ ಕಾಳಜಿಗೆ ಅನಂತಾನಂತ ಧನ್ಯವಾದಗಳು.
  ಆದ್ರೆ ಮಲ್ಲಿಕಾಳ ಡ್ರೆಸ್ ಥರಾ?
  ಓ... ಬಿಡಿ.... ಹಾಗಿದ್ದರೆ ನಂಗೆ ಚಿಂತೆ ಇಲ್ಲವೇ ಇಲ್ಲ!!!!

  ReplyDelete
 4. ಮಾವಿನಯನಸರೆ,
  ಸಾರ್ವಜನಿಕರೆಲ್ಲಾ ನಿಮಗೆ ಮುಗಿಬಿದ್ದು ಕೈ ಎತ್ತಿ ಮುಗಿಯುತ್ತಿದ್ದಾರೆ....
  ಅವರನ್ನೆಲ್ಲಾ ದೋಷಮುಕ್ತರಾಗಿಸಿದ್ದಕ್ಕೆ...!!!

  ReplyDelete
 5. ಕನ್ನಡಕ್ಕೂ ಬರ್ತಾಳಂತಲ್ಲಪ್ಪಾ...ಮಲ್ಲಮ್ಮಾ... ಇನ್ನು ಕನ್ನಡ ಕಂದರ ಗತಿ "ರಮ್ಯೋ ರಾಧಿಕಿ ರಕ್ಷಿತಃ"!!!!!!!!

  ReplyDelete
 6. ಅನಾನಿಮಸರೆ,

  (ನೀವೂ ಪಬ್ಬಿನಿಂದ ಕಾಮೆಂಟಿಸುತ್ತಿಲ್ಲ ಅಂತ ಭಾವಿಸುವೆ...)
  ಇನ್ನು ಕನ್ನಡದ ಕಂದರು ಯಾವತ್ತೂ ತೇಲಾಡುತ್ತಿರುತ್ತಾರೆ...:)

  ReplyDelete
 7. kannada kaMdrannu Iga kumaaraNNa
  tElisi muLugisuttiruvudE saaku....
  I mahaa taayiyaryaarU bEDappaa....

  ReplyDelete
 8. ಅನಾನಿಮಸರೆ
  ಕನ್ನಡದ ಕಂದರನ್ನು ಕುಮಾರಣ್ಣ ರಕ್ಷಿಸಿದರೂ ರಮ್ಮಿ-ರಾಕ್ಷಿಗಳನ್ನು ಕನ್ನಡದ ಕಂದರೇ ರಕ್ಷಿಸುತ್ತಾರೆ!!!

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...