Monday, June 09, 2008

ಅರಿವಿಲ್ಲದೆ ಡೈವರ್ಸ್: ಹೊಸ ಉದ್ಯೋಗಾವಕಾಶ

(ಬೊಗಳೂರು ನಿರುದ್ಯೋಗ ನಿವಾರಣಾ ಬ್ಯುರೋದಿಂದ)
ಬೊಗಳೂರು, ಜೂ.9- ಗಂಡ-ಹೆಂಡಿರಿಗೆ ಗೊತ್ತಿಲ್ಲದೆಯೇ ಡೈವರ್ಸ್ ಮಾಡಿಸುವ ದಂಧೆಯೊಂದು ದೇಶದಲ್ಲಿ ಶುರುವಾಗಿದ್ದು, ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಾ, ನಿರುದ್ಯೋಗ ನಿವಾರಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಪ್ರಸಂಗ ಇಲ್ಲಿ ವರದಿಯಾಗಿದೆ.

ಇದನ್ನು ಸಮರ್ಥಿಸಿಕೊಂಡಿರುವ 'ಡೈವರ್ಸ್ ಅನಾನಿಮಸ್' ಎಂಬ ಸಂಸ್ಥೆಯು, ಡೌರಿಗೂ ಡೈವರ್ಸಿಗೂ ಯಾವತ್ತೂ ಆತ್ಮೀಯ ಸಂಬಂಧವಿರುತ್ತದೆ. ಹೀಗಾಗಿ ಡೌರಿಯಲ್ಲಿ ಸಿಲುಕಿಕೊಳ್ಳಲು ಇಚ್ಛಿಸದವರು ಡೈವರ್ಸ್ ಎಂಬ ಕೋರ್ಸನ್ನು ಆರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಡೌರಿಗಿಂತಲೂ ಡೈವರ್ಸ್ ಹೇಗೆ ವಿಭಿನ್ನ ಎಂದು ಕೇಳಲಾದಾಗ, ಡೌರಿಯಲ್ಲಿ ಹರಾಸ್ಮೆಂಟ್ ಎಲ್ಲಾ ಇರುತ್ತದೆ. ಗಂಡ ಹೆಂಡಿರಿಗೆ ಜಗಳ, ಮಗು ಮೂಲೆಗುಂಪಾಗುತ್ತದೆ. ಆಮೇಲೆ ಈ ಜಗಳವು ಭಾವನಾತ್ಮಕವಾಗಿ ಮನಸ್ಸು (ಇದ್ದರೆ) ಹಿಂಡುತ್ತದೆ. ಉಭಯ ಬಣದವರಿಗೂ ತೊಂದರೆಯೇ ತೊಂದರೆ. ಆದರೆ ಈ ರೀತಿಯ ಡೈವರ್ಸಿನಿಂದ ಯಾರಿಗೂ ಯಾವುದೇ ಮಾನಸಿಕ ತಾಕಲಾಟ-ಪೀಕಲಾಟಗಳಿರುವುದಿಲ್ಲ. ಯಾರಿಗೂ ಏನೂ ಆಗಿಯೇ ಇಲ್ಲ ಎಂಬಂತಹ ಸ್ಥಿತಿ ಇರುತ್ತದೆ. ಇಲ್ಲಿ ನೋವು-ಸಿಟ್ಟು-ಸೆಡವುಗಳಿರುವುದಿಲ್ಲ ಎಂದು ಸಂಸ್ಥೆಯ ರೂವಾರಿಗಳೂ, ಇಪ್ಪತ್ತು ಬಾರಿ ಡೌರಿ ತೆಗೆದುಕೊಂಡು, ಇಪ್ಪತ್ತೇಳು ಬಾರಿ ಡೈವರ್ಸ್ ನೀಡಿ ವಿಶ್ವ ದಾಖಲೆ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಡೌರು ಕುಮಾರ್ ಎಂಬವರು ತಿಳಿಸಿದ್ದಾರೆ.

ಎಷ್ಟೇ ಆದರೂ, ಇದು ಬೊಗಳೆಯು ಸ್ಪಾಂಟೇನಿಯಸ್ ಆಗಿ ಡೈವರ್ಸ್ ಪಡೆಯಲು ಹಲವು ವರ್ಷಗಳ ಹಿಂದೆ ಪತ್ತೆ ಹಚ್ಚಿದ್ದ ಸ್ಪೂನ್‌-ಟೇನಿಯಸ್ ಡೈವರ್ಟಿನ್ ಎಂಬ ಟೂಲ್‌ನಷ್ಟು ಪ್ರಭಾವ ಬೀರುವುದಿಲ್ಲ ಎಂದು ಬೊಗಳೆ ಸಂಚೋದನಾ ಬ್ಯುರೋ ಕಂಡುಕೊಂಡಿದೆ.

8 comments:

 1. ನಿಜಕ್ಕೂ "Spoon-taneous Divertin" ಅಷ್ಟು ಪ್ರಭಾವ ಬೀರುತ್ತಿಲ್ಲ... ಕಾಲಾಯ ತಸ್ಮೈ ನಮಃ... ;-)

  ReplyDelete
 2. ಅಲ್ಲ ಅಸತ್ಯ ಅನ್ವೇಷಿಗಳು "ಬೊಗಳೆ..."ಯ ಹಳೆ ಪೇಜ್ ಲೇಔಟ್ಗೂ ಡೈವರ್ಸ್ ಕೊಟ್ಟಿದ್ದಾರೆ ಅನ್ಸುತ್ತೆ. :)

  ಹೊಸ ಬೆಡಗಿನ ಲೇಔಟ್ ಬಂದಿದೆ ಹೊಸ ರಗಳೆ ಜೊತೆ.

  ReplyDelete
 3. ಗೊತ್ತಿಲ್ಲದೆ ಮದುವೆಯಾಗುವ ದಂ-ಪತಿಗಳೂ ಇದ್ದಾರೆ. ಇನ್ನು ಗೊತ್ತಿಲ್ಲದೆ ಸೋಡಚೀಟಿಗೆ ಸಹಿ ಹಾಕುವದರಲ್ಲಿ ಆಶ್ಚರ್ಯವಿಲ್ಲ.
  ಅಂದಹಾಗೆ,ಅನ್ವೇಷಿಗಳೆ, ನಮ್ಮ ಪ್ರಥಮ ಪ್ರಧಾನಿ ನೆಹರೂರವರ
  ಪರಿಚಯದ ಪ್ರಸಿದ್ಧ anthropologist ಒಬ್ಬರು (--ಅವರ ಹೆಸರು ಮರೆತಿದ್ದೇನೆ--), ಒಬ್ಬಳು Indian tribal teenagerಳನ್ನು ಮದುವೆಯಾಗಿದ್ದು, ಅವಳಿಗೆ ತಿಳಿಯದಂತೆಯೇ ಡೈವೋರ್ಸ್ ಕೊಟ್ಟಿದ್ದರೆಂದು ನಾನು ಓದಿದ್ದೆ.

  ReplyDelete
 4. ಹ ..ಹ.ಹ...ಚೆನ್ನಾಗಿದೆ

  ReplyDelete
 5. ತೇಜಸ್ವಿನಿ ಅವರೆ,
  Spoon-taneous Divertin ಪ್ರಭಾವ ಬೀರುತ್ತಿಲ್ಲ ಅಂತ ಸರ್ಟಿಫಿಕೆಟ್ ಕೊಟ್ಟು ನಮ್ಮ ಸಂ-ಚೋದನಾ ಬ್ಯುರೋದ ಹೆಸರು ಕೆಡಿಸಲು ಮತ್ತು ಅದರ ಮಾರಾಟ ತಗ್ಗಿಸಲು ಸಂಚು ಹೂಡುತ್ತಿರುವ ನಿಮ್ಮ ಪ್ರಯತ್ನ ಶ್ಲಾಘನಾರ್ಹ.

  ReplyDelete
 6. ಅಮರ ಅವರೆ,
  ಈ ಲೇಔಟ್ ಬದಲಾವಣೆ ಕೂಡ ನಮಗೆ ಅರಿವಿಲ್ಲದಂತೆಯೇ ಆಗಿದೆ ಅಂತ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. :)

  ReplyDelete
 7. ಸುನಾಥರೆ,
  ಹೌದು, ಬಹುಶಃ ನೀವೆಲ್ಲೋ ಕನ್‌ಫ್ಯೂಶಿಯಸ್ ಸಿದ್ಧಾಂತದಲ್ಲಿ ಸಿಲುಕಿರಬೇಕು. ಅಂದ್ರೆ, ಸ್ಪೆಲ್ಲಿಂಗ್ ಕನ್‌ಫ್ಯೂಶಿಯಸ್. ಅದು ಅಂಥ್ರಪಾಲಜಿಸ್ಟ್ ಇದ್ದಿರಲಾರದು. ಡೈವರ್ಟಾಲಜಿಸ್ಟ್ ಇದ್ದರೂ ಇರಬಹುದು!!!

  ReplyDelete
 8. ಮಾಲಾ ಅವರೆ,

  ಚಿತ್ರದುರ್ಗದಿಂದ ಹ ಅಕ್ಷರಗಳನ್ನು ಉದುರಿಸಿದ್ದೀರಿ. ಅವುಗಳನ್ನು ಹೆಕ್ಕಿಕೊಳ್ಳುವ ಕಾರ್ಯ ಭರದಿಂದ ಸಾಗುತ್ತಿದೆ. ಧನ್ಯವಾದ.

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...